ಅಭಿಪ್ರಾಯ / ಸಲಹೆಗಳು

ರಂಗದ ಕುಣಿತ

ಕರ್ನಾಟಕ ರಾಜ್ಯದ ಒಂದು ಜನಪದ ಕಲೆ, ವಿಶೇಷವಾಗಿ ಮೈಸೂರು, ಮಂಡ್ಯ, ಬೆಂಗಳೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಾಣಬಹುದು. ಈ ಕಲೆ ಊರಿನ ಪ್ರಮುಖ   ದೇವಸ್ಥಾನದ ಮುಂಭಾಗದಲ್ಲಿ ನಡೆಯುತ್ತದೆ. ಇದು ಸುಗ್ಗಿಯ ಕಾಲದಲ್ಲಿ ನಡೆಯುವುದರಿಂದ ಸುಗ್ಗಿ ಕುಣಿತವೆಂತಲೂ ಕರೆಯುತ್ತಾರೆ. ಒಕ್ಕಣೆ ಮಾಡಿ ದವಸ ಧಾನ್ಯಗಳನ್ನು ಮನೆಗೆ ಕೊಂಡೊಯ್ಯುವ ಸಂದರ್ಭ ಮತ್ತು ಗ್ರಾಮ ದೇವತೆಗಳ ಹಬ್ಬದ ಸಂದರ್ಭದಲ್ಲಿ ನಡೆಯುತ್ತದೆ.

ರಂಗದ ಕುಣಿತಕ್ಕೆ ತಮಟೆ, ನಗಾರಿ ವಾದ್ಯಗಳ ಅಗತ್ಯ ಇರುತ್ತದೆ. ಕಲಾವಿದರು ಕುಣಿತಕ್ಕೆ ಮುನ್ನ ಕಂಬದ ಸುತ್ತ ಮೂರು ಸುತ್ತು ಸುತ್ತಿ ನಮಸ್ಕರಿಸುತ್ತಾರೆ. ಅನಂತರ ಮುಂದಿನ  ಬಯಲಿಗೆ  ಒಂದು  ಉದ್ದಕ್ಕೆ ಸಾಲಾಗಿ ನಿಂತು ಕುಣಿಯುತ್ತಾರೆ. ಕಾಲಿಗೆ ಗೆಜ್ಜೆ ಕಟ್ಟಿರುತ್ತಾರೆ. ನಡುವಿಗೆ ಚೌಕ ಸುತ್ತಿಕೊಂಡು ಕೈಯಲ್ಲೊಂದು ಚೌಕ ಹಿಡಿದಿರುತ್ತಾರೆ. ಕುಣಿಯಲು ನಿರ್ದಿಷ್ಟ ಕಲಾವಿದರಿರಬೇಕೆಂಬ ನಿಯಮವಿಲ್ಲ. ಕಲಾವಿದರು ಹಾಕುವ ಹೆಜ್ಜೆಗಳ ಲೆಕ್ಕದಲ್ಲಿ ಮೂರು ಹೆಜ್ಜೆ, ಐದು ಹೆಜ್ಜೆ, ಏಳು ಹೆಜ್ಜೆ ಇತ್ಯಾದಿ ವರಸೆಗಳ ಕುಣಿತಗಳಿವೆ. ನಿಂತ ಜಾಗದಿಂದ ಬಿಟ್ಟು ಹಿಂದಕ್ಕೆ ಮುಂದಕ್ಕೆ ಎಷ್ಟು ಹೆಜ್ಜೆಗಳನ್ನು ಹಾಕುತ್ತಾರೋ ಅದರ ಮೇಲೆ ಲೆಕ್ಕ ಹಾಕುತ್ತಾರೆ. ಐದು ಹೆಜ್ಜೆಯ ಕುಣಿತಕ್ಕೆ ತಿರುಗಿ ಕುಣಿತ ಎಂದು ಕರೆಯುತ್ತಾರೆ. ಇದು ವೃತ್ತಾಕಾರದಲ್ಲಿ ನಡೆಯುತ್ತದೆ. ಕುಣಿಯುವಾಗ ಮಧ್ಯೆ “ಭೂ ಭಲಿರೇ ಆಹಾ” ಎಂದೆಲ್ಲ ಕೂಗು ಹಾಕುತ್ತಾರೆ.

ಹಲವಾರು ವಿಧದಲ್ಲಿ ಕುಣಿದು ಮಧ್ಯೆ ಮಧ್ಯೆ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುವಾಗ ಊರ ದೇವತೆಯನ್ನು ಕುರಿತ ಹಾಡುಗಳನ್ನು ಹಾಡುತ್ತಾರೆ. ಈ ಹಾಡುಗಳಿಗೆ  “ರಂಗದ ಪದ”  ಎಂದು ಕರೆಯುವರು ಹೀಗೆ ಹಬ್ಬದ ದಿನದವರೆಗೆ ಕುಣಿದ ಜನರು ಹಬ್ಬ ಮುಗಿದ ಅನಂತರ ಕೊಂಡದ ಶಾಸ್ತ್ರದ ಮೂರನೆಯ ದಿನ ಈ ಕಂಬವನ್ನು ಕಳಸ, ವಾದ್ಯ ಸಮೇತ ತೆಗೆದುಕೊಂಡು ಹೋಗಿ ನೀರಿನಲ್ಲಿ ಬಿಡುವುದರೊಂದಿಗೆ ಕುಣಿತ ಮುಕ್ತಾಯವಾಗುವುದು.  

 

 

ಇತ್ತೀಚಿನ ನವೀಕರಣ​ : 18-04-2024 12:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಜಾನಪದ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080